Introduction for Google Apps





ನೀವು ಗೂಗಲ್ ನ ಕೆಲವು ಅಪ್ಲಿಕೇಶನ್ ಗಳನ್ನೂ ತಿಳಿದುಕೊಳ್ಳಲಿಲ್ಲಾ ಅಂದ್ರೆ ಮೊಬೈಲ್ ಮತ್ತು ಕಂಪ್ಯೂಟರ್ ಇದ್ರೂ ವ್ಯರ್ಥ.
ಆ ಅಪ್ಲಿಕೇಶನ್ ಗಳಾದರೂ ಏನು ಅಂತ ನೋಡೋಣ ಬನ್ನಿ.
ಗೂಗಲ್ ನ್ ಅತಿ ಮುಖ್ಯವಾದ ಅಪ್ಲಿಕೇಷನ್ ಗಳ ಪರಿಚಯ ಮತ್ತು
ಅಪ್ಲಿಕೇಷನ್ ಗಳ ಉಪಯೋಗಗಳು.  


ಒಂದು ಗೂಗಲ್ ಅಕೌಂಟ್,
ಒಂದು ಇಮೇಲ್ ಮತ್ತು ಪಾಸ್ವರ್ಡ್ ನಿಂದ
ಉಪಯೋಗಿಸಿ ಎಲ್ಲ ಗೂಗಲ್ ಅಪ್ಲಿಕೇಶನ್ ಗಳನ್ನು.

ಗೂಗಲ್ ಅಂದರೆ ಕೆವಲ ಸರ್ಚ್ ಎಂಜಿನ್ , ಗೂಗಲ್ ಮ್ಯಾಪ್ಸ್ , ಯೂಟ್ಯೂಬ್ , ಗೂಗಲ್ + ಮತ್ತು ಜಿಮೈಲ್ ಈಮೇಲ್ (Gmail) ಅಂತ ತಿಳಿದುಕೊಂಡರೆ ಅದು ತಪ್ಪು, 
ಗೂಗಲ್ ನ ಅತಿ ಮುಖ್ಯವಾದ ಅಪ್ಲಿಕೇಶನ್ ಗಳು ಎಷ್ಟು ಇವೆ ಮತ್ತು 
ಅಪ್ಲಿಕೇಶನ್ ಗಳ ಉಪಯೋಗ ಏನು ಅಂತ ನೋಡೋಣ.

೧. Google App & Google Assistant App.




ಇದು ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಮಾತ್ರ ಉಪಯೋಗಕ್ಕೆ ಬರುತ್ತೆ, ಗೂಗಲ್ ಅಸಿಸ್ಟೆಂಟ್ 20 ಅಕ್ಟೋಬರ್ 2016 ರಂದು ಪ್ರಾರಂಭಿಸಿದರು. ಈ ಅಪ್ಲಿಕೇಶನ್ ಸ್ಮಾರ್ಟ್ ಫೋನ್ ನಲ್ಲಿ ಡೌನ್ಲೋಡ್ ಮಾಡಿಕೊಂಡು Location on ಮಾಡಿದರೆ, ಈ ಅಪ್ಲಿಕೇಶನ್ ನೀವು ಇರುವ ಸ್ಥಳ ಮತ್ತು address ಮಾಹಿತಿ ಮತ್ತು ನೀವು ಹುಡುಕುವ ಹತ್ತಿರದ ಸ್ಥಳಗಳನ್ನೂ ಸುಲಭವಾಗಿ ತಿಳಿದುಕೊಳ್ಳಬಹುದು ಇದು ಕೆಲವು ಹಳ್ಳಿಗಳಲ್ಲಿ ಲಭ್ಯವಿಲ್ಲ, ಮತ್ತು ನೀವು ಆಂಡ್ರಾಯ್ಡ್ ಮೊಬೈಲ್ ಹೋಂ ಬಟನ್ ಒತ್ತಿ ಹಿಡಿದಾಗ Google ಅಂತ ಬರುತ್ತೆ, ಇಲ್ಲಿ ನೀವು ಏನಾದರು ಮಾತನಾಡಿದರೆ ಸಾಕು ಅದು ತಾನಾಗಿ ಓಪನ್ ಆಗುತ್ತೆ, ಉದಾಹರಣೆಗೆ: ಬೆಳಗಾವಿ, ಅಂತ ಮಾತಾಡಿದ್ರೆ ಸಾಕು ಬೆಳಗಾವಿ ನಗರ ಬಗ್ಗೆ ಮಾಹಿತಿ ಕೊಡುತ್ತೆ.



_______________________________________________



೨. Google+ (Plus).


ಗೂಗಲ್ ಪ್ಲಸ್ ಎಂದರೆ ಇದು ಒಂದು ಸಾಮಾಜಿಕ ಜಾಲತಾಣ, ಗೂಗಲ್ ಪ್ಲಸ್ ಅಪ್ಲಿಕೇಶನ್ ನ್ನು 28 ಜೂನ್ 2011 ರಂದು ಪ್ರಾರಂಭಿಸಿದರು. ಈ ಅಪ್ಲಿಕೇಶನ್ ಕೂಡಾ ಫೇಸ್ಬುಕ್ ನಂತೆ ಕೆಲಸ ಮಾಡುತ್ತೆ,

ಈ ಅಪ್ಲಿಕೇಶನ್ ನಿಂದ ವಯಕ್ತಿಕ ಸಂದೇಶ್ ಗಳು, ಪಬ್ಲಿಕ್ ಸಂದೇಶ್ ಗಳು, Group ಸಂದೇಶ್ ಗಳು ಮತ್ತು ವಿಡಿಯೋ ಗಳನ್ನೂ Upload ಮಾಡಬಹುದು, ಗೂಗಲ್+ ಎಲ್ಲಾ ಸಾಮಾಜಿಕ ಜಾಲತಾಣಕ್ಕಿಂತ ಅತ್ಯುತ್ತಮವಾದದ್ದು,

ಗೂಗಲ್ ಪ್ಲಸ್ ನಲ್ಲಿ ಯಾರಾದ್ರೂ ನಕಲಿ ಖಾತೆಗಳನ್ನು ತೆರೆದರೆ ಆದಷ್ಟು ಬೇಗ ಕಂಡು ಹಿಡಿಯಬಹುದು.

ಸ್ನೇಹಿತರೆ ಆದಷ್ಟು ಗೂಗಲ್ ಪ್ಲಸ್ ಅಪ್ಲಿಕೇಶನ್ ಉಪಯೋಗಿಸಿ.

_______________________________________________

೩. Gmail.



ಜಿಮೈಲ್ ಎಂದರೆ ಇದು ಒಂದು ಇಮೇಲ್ ವಿಳಾಸ ಇದರಿಂದ ನಮ್ಮ ವಯಕ್ತಿಕ ಸಂದೇಶ್ ಗಳು, ವೀಡಿಯೋಸ್, ಫೋಟೋಗಳು ಮತ್ತು ಎಲ್ಲ ರೀತಿಯ ಫೈಲ್ ಗಳನ್ನು ಕಳುಹಿಸಬಹುದು, ಅಷ್ಟೇ ಅಲ್ಲ ಒಂದೇ ಸಮಯದಲ್ಲಿ ನೂರಾರು ಜನರಿಗೆ ಇಮೇಲ್ ಕಳುಹಿಸಬಹುದು. ಗೂಗಲ್ ನವರು ಜಿಮೈಲ್ ಅಪ್ಲಿಕೇಶನ್ ನ್ನು 1 ಏಪ್ರಿಲ್ 2004 ರೊಂದು ಪ್ರಾರಂಭಿಸಿದರು.
Gmail ನಿಮ್ಮ ಸಮಯವನ್ನು ಉಳಿಸುತ್ತದೆ ಮತ್ತು ನಿಮ್ಮ ಸಂದೇಶಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವ ಸುಲಭವಾದ ಇಮೇಲ್ ಅಪ್ಲಿಕೇಶನ್ ಆಗಿದೆ. ಆನ್ಲೈನ್ ಮತ್ತು ಆಫ್ಲೈನ್ ಅನ್ನು ಓದಿ ಮತ್ತು ಪ್ರತಿಕ್ರಿಯಿಸಿ ಮತ್ತು ಯಾವುದೇ ಸಂದೇಶವನ್ನು ತಕ್ಷಣ ಹುಡುಕಿ.
ನಿಮ್ಮ ಖಾತೆ Gmail ಸುರಕ್ಷಿತವಾಗಿರುತ್ತದೆ ಮತ್ತು ಸುರಕ್ಷಿತ ಇಲ್ಲದ ಇಮೇಲ್ ಸಂದೇಶಗಳು ಅಥವಾ ಹ್ಯಾಕರ್ಗಳು ಇಮೇಲ್ ಹ್ಯಾಕ್ ಮಾಡಲು ಲಿಂಕ್ ಕಳಿಸಿದರೆ ಅದು Spam ಅಂತ ಫೋಲ್ಡರ್ ಗೆ ಹೋಗುತ್ತೆ . 15 ಜಿಬಿ ಉಚಿತ ಡೇಟಾ ಸಂಗ್ರಹಣೆ - ಸ್ಥಳ ಉಳಿಸಲು ನೀವು ಸಂದೇಶಗಳನ್ನು ಅಳಿಸಬೇಕಾದ ಅಗತ್ಯವಿಲ್ಲ.

_____________________________________________

೪. Hangouts.



ಹ್ಯಾಂಗೌಟ್ಸ್ ಎಂದರೆ ಇದು ಕೂಡ ಒಂದು ಸಾಮಾಜಿಕ ಜಾಲತಾಣ, ಗೂಗಲ್ ಹ್ಯಾಂಗೌಟ್ಸ್ ನ್ನು 15 ಮೇ 2013 ರಂದು ಪ್ರಾರಂಭಿಸಲಾಗಿದೆ. ಇದರಿಂದ ನಾವು ವಿಡಿಯೋ ಕರೆ ಮಾಡಬಹುದು, ವಯಕ್ತಿಕ ಸಂದೇಶಗಳನ್ನು ಕಳಿಸಬಹದು, ಧ್ವನಿ ರೆಕಾರ್ಡಿಂಗ್ ಸಂದೇಶ (voice recording message ) ಕಳುಹಿಸಬಹುದು, Mp3 ಹಾಡುಗಳನ್ನು ಕಳುಹಿಸಬಹುದು, ವಿಡಿಯೋಗಳನ್ನೂ ಕಳುಹಿಸಬಹುದು ಮತ್ತು ಗ್ರೂಪ್ ಚಾಟಿಂಗ್ ಮಾಡಬಹುದು.
ಫೇಸ್ಬುಕ್ ಮೆಸ್ಸಂಜೆರ್ ಕಿಂತ ಇದು ಉತ್ತಮ.
_______________________________________________

೫.Google Drive.


ಮೊದಲು ನಾವು File ಗಳ ಸಂಗ್ರಹಣೆಗಾಗಿ Pen Drive ಗಳನ್ನೂ ಉಪಯೋಗಿಸುತಿದ್ದೆವು, ಅದರಿಂದ ನಾವು ಎಷ್ಟೋ ಸಮಸ್ಯೆಗಳನ್ನು ಎದುರಿಸುತಿದ್ದೆವು pen drive ಗಳು ಕಳೆದು ಹೋದಾಗ, pen drive ಗಳು ಓಪನ್ ಆಗದೆ ಇದ್ದಾಗ ಮತ್ತು ವೈರಸ್ ಅಟ್ಯಾಕ್ ಆದಾಗ, ಆದರೆ ಈಗ ಗೂಗಲ್ ಕಂಪನಿ ಈ ಸಮಸ್ಯೆಗಳಿಗೆ ಪರಿಹಾರ ಹುಡುಕಿದೆ.
ಗೂಗಲ್ ಡ್ರೈವ್ ಇದು ಆನ್ಲೈನ್ ಫೈಲ್ಗಳ ಸಂಗ್ರಹಣೆಗಾಗಿ ಗೂಗಲ್ ಕಂಪನಿಯು 24 ಏಪ್ರಿಲ್ 2010 ರಲ್ಲಿ ಪ್ರಾರಂಭಿಸಿದೆ, ಇದರಲ್ಲಿ ನಾವು ಯಾವುದೇ File ಗಳನ್ನೂ ಸಂಗ್ರಹಿಸಬಹುದು ಮತ್ತು ಗೂಗಲ್ ಡ್ರೈವ್ ನಲ್ಲಿ 15GB ವರೆಗೆ ಉಚಿತ Storage ಜಾಗ ಇರುತ್ತದೆ . ಗೂಗಲ್ ಡ್ರೈವ್ ನಲ್ಲಿ ನಾವು ಅಪ್ಲೋಡ್ ಮಾಡುವ ನಮ್ಮ File ಗಳು ಸುರಕ್ಷಿತವಾಗಿರುತ್ತೇವೆ ಮತ್ತು ನಾವು ನಮ್ಮ File ಗಳನ್ನೂ ಯಾರಿಗಾದರೂ ಹಂಚಿಕೊಳ್ಳಬೇಕಾದ್ರೆ Share ಅಂತ ಆಯ್ಕೆ ಇರುತ್ತೆ ಅಲ್ಲಿ ನಾವು ಯಾವ file ಕಳುಹಿಸಬೇಕು ಅದನ್ನು ಮಾತ್ರ ಆಯ್ಕೆ ಮಾಡಬೇಕು, ಇಲ್ಲ ಅಂದರೆ ಡೌನ್ಲೋಡ್ ಮಾಡಿಕೊಳ್ಳಬಹುದು.
ನಮ್ಮ ಮೊಬೈಲ್ ನಲ್ಲಿ ಡೇಟಾ ಬ್ಯಾಕಪ್ ಆನ್ ಇಡಬೇಕು, ಯಾಕೆಂದರೆ ಒಂದು ವೇಳೆ ನಮ್ಮ ಮೊಬೈಲ್ ಹಾನಿ ಆದರೆ ಅಥವಾ ಮೊಬೈಲ್ ಕಳೆದು ಹೋದರೆ ಬ್ಯಾಕಪ್ ಆದ File ಗಳನ್ನೂ ಮತ್ತೆ ಪಡೆಯಬಹುದು.
ನಮ್ಮ ಹೊಸ ಮೊಬೈಲ್ ಮರಳಿ ಬ್ಯಾಕಪ್ ಪಡೆಯಲು ನಮ್ಮ ಗೂಗಲ್ Gmail ಐಡಿ ಮತ್ತು ಪಾಸ್ವರ್ಡ್ ನೆನೆಪು ಇದ್ರೆ ಸಾಕು. ಅಷ್ಟೇ ಅಲ್ಲ ನಮ್ಮ ಕಂಪ್ಯೂಟರ್ ನಲ್ಲಿದ್ದ file ಗಳನ್ನೂ ಕೂಡ ಬ್ಯಾಕಪ್ ಪಡೆಯಬಹುದು.
_______________________________________________

೬. Google Keep.
ಗೂಗಲ್ ಕೀಪ್ ಎಂದರೆ ನೋಟ್ಸ್ ಗಳನ್ನೂ ಬರೆಯುವ ಸೇವೆ (service) ಈ ಅಪ್ಲಿಕೇಶನ್ ನ್ನು ಗೂಗಲ್ ಕಂಪನಿ ಯವರು 20 ಮಾರ್ಚ್ 2013 ರಂದು ಪ್ರಾರಂಭಿಸಿದರು, ಈ ಅಪ್ಲಿಕೇಶನ್ ನ್ನು ಆಂಡ್ರಾಯ್ಡ್ Appಗಳಲ್ಲಿ ಮತ್ತು ವೆಬ್ಸೈಟ್ ನಲ್ಲಿ ಲಭ್ಯವಿದೆ.
ಈ ಅಪ್ಲಿಕೇಶನ್ ನಲ್ಲಿ ನೋಟ್ಸ್ ಗಳು, ವಾಯ್ಸ್ ರೆಕಾರ್ಡ್ ಗಳು, ಫೋಟೋಗಳು, ಮಾರುಕಟ್ಟೆಯಲ್ಲಿ ಖರೀದಿಸುವ ವಸ್ತುಗಳ ಪಟ್ಟಿ ಮಾಡಬಹುದು ಮತ್ತು ಕೈ ಬರಹ ನೋಟ್ಸ್ ಉಪಯೋಗಿಸಬಹುದು. ಗೂಗಲ್ ಕೀಪ್ ನಲ್ಲಿ ಯಾವುದೇ ಬರಹಗಳು, ರೆಕಾರ್ಡ್ಸ್ ಗಳು ಮತ್ತು ಫೈಲ್ಸ್ ಗಳು ಸುರಕ್ಸಿತವಾಗಿರುತ್ತವೆ, Google Keep ಉಪಯೋಗಿಸಬೇಕಾದರೆ ನಾವು Gmail ಐಡಿ ಮತ್ತು Password ಇಂದ ಸೈನ್ ಇನ್ ಆಗಬೇಕು.

_______________________________________________

೭. Google Translate.
ಗೂಗಲ್ ಟ್ರಾನ್ಸ್ ಲೆಟ್ ಎಂದರೆ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸುವುದು (ಭಾಷಾಂತರಿಸುವುದು), ಇದನ್ನು ಗೂಗಲ್ ಕಂಪನಿಯವರು 28 ಏಪ್ರಿಲ್ 2006 ರಲ್ಲಿ ಪ್ರಾರಂಭಿಸಿದರು,
ಈ ಅಪ್ಲಿಕೇಶನ್ ನಲ್ಲಿ ನಮಗೆ ಅರ್ಥ ಆಗದ ಬೇರೆ ಭಾಷೆಯನ್ನು ನಮ್ಮ ಭಾಷೆಯಲ್ಲಿ ನೋಡಬಹುದು ಮತ್ತು ಕನ್ನಡದಿಂದ ಇಂಗ್ಲಿಷ್ ಕಲಿಯಲು ಕೂಡ ಗೂಗಲ್ translate ಉಪಯೋಗಕ್ಕೆ ಬರುತ್ತೆ. ಅಷ್ಟೇ ಅಲ್ಲ Microsoft word ಡಾಕ್ಯುಮೆಂಟ್ ಕೂಡ ಒಂದು ಭಾಷೆಯಿಂದ ಇನ್ನೊಂದು ಅನುವಾದಿಸಬಹುದು.


_______________________________________________

೮. Google Map.
ಗೂಗಲ್ ಮ್ಯಾಪ್ ಎಂದರೆ ಇದು ಪ್ರಪಂಚದ ಪ್ರತಿಯೊಂದು ನಗರ ಪಟ್ಟಣಗಳ ರಸ್ತೆ ನಕ್ಷೆಗಳು, ಉಪಗ್ರಹ ಚಿತ್ರಣ (Satellite image) , ನೈಜ ಸಮಯ ರಸ್ತೆ ಸಂಚಾರ ಪರಿಸ್ಥಿತಿಗಳನ್ನೂ ತಿಳಿಯಬಹುದು (Real time road traffic) ಮತ್ತು 360° ಡಿಗ್ರಿ ರಸ್ಥೆಗಳ ದೃಶ್ಯಾವಳಿಗಳನ್ನೂ ವೀಕ್ಷಣೆ ಮಾಡಬಹುದು.
Google ನಕ್ಷೆಯನ್ನು ಗೂಗಲ್ ಕಂಪನಿಯವರು ಅಭಿವೃದ್ಧಿಪಡಿಸಿದ ವೆಬ್ ಮ್ಯಾಪಿಂಗ್ ಸೇವೆಯಾಗಿದೆ, ಗೂಗಲ್ ನಕ್ಷೆಯನ್ನು 8 ಫೆಬ್ರವರಿ 2005 ರಲ್ಲಿ ಪ್ರಾರಂಭಿಸಿದರು.
ನಾವು ಯಾವಾದರೂ ಒಂದು ನಗರ ಅಥವಾ ಪಟ್ಟಣಕ್ಕೆ ಹೋಗಬೇಕಾದರೆ ಅಲ್ಲಿ ನಮಗೆ ಕೆಲವೊಂದು ವಿಳಾಸ ಮತ್ತು ಮಾರ್ಗ (address and route) ಗೊತ್ತಿರುವುದಿಲ್ಲ ಅಂತಹ ಸಮಯದಲ್ಲಿ ನಮಗೆ ಗೂಗಲ್ ನಕ್ಷೆ ಉಪಯೋಗಕ್ಕೆ ಬರುತ್ತೆ.


_______________________________________________

೯. Google Contacts.
ಗೂಗಲ್ ಕಾಂಟ್ಯಾಕ್ಟ್ಸ್ ಎಂಬುದು Google ನ ಸಂಪರ್ಕ ನಿರ್ವಹಣೆ ಸಾಧನವಾಗಿದ್ದು, ಗೂಗಲ್ ಕಾಂಟ್ಯಾಕ್ಟ್ಸ್ ನ್ನು 3 ಮಾರ್ಚ್ 2015 ರಂದು ಪ್ರಾರಂಭಿಸಲಾಗಿದೆ. ಸ್ಮಾರ್ಟ್ಫೋನ್ ಮೊಬೈಲ್ ಉಪಯೋಗಿಸುವ ಪ್ರತಿಯೊಬ್ಬರೂ ಗೂಗಲ್ ಕಾಂಟ್ಯಾಕ್ಟ್ಸ್ ನ್ನು ಒಪಯೋಗಿಸಲೇಬೇಕು, ಯಾಕೆಂದ್ರೆ ಎಷ್ಟೋ ಸಲ ನಮ್ಮ ಮೊಬೈಲ್ ಗಳು ಹಾನಿ ಆದಾಗ ಮತ್ತು ಕಳೆದು ಹೋದಾಗ ನಮ್ಮ ಸ್ನೇಹಿತರ ಅಥವಾ ಆಫೀಸ್ ಫೋನ್ ನಂಬರ್ಸ್ ಗಳನ್ನು ಕಳೆದುಕೊಂಡು ಎಷ್ಟೋ ಕಷ್ಟ ಪಡುತ್ತೇವೆ, ಆದರೆ ಈಗ ನಮ್ಮ ಫೋನ್ ಬುಕ್ ನಲ್ಲಿದ್ದ ನಂಬರ್ ಗಳನ್ನೂ ಸುರಕ್ಷಿತವಾಗಿ ಇಡಲು ಗೂಗಲ್ ಕಂಪನಿಯವರು ಗೂಗಲ್ ಕಾಂಟ್ಯಾಕ್ಟ್ಸ್ ಎಂಬ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ, ನಾವು ಯಾವುದೇ ಫೋನ್ ನಂಬರ್ ಗಳನ್ನೂ ಮೊಬೈಲ್ ನಲ್ಲಿ ಉಳಿಸಿಕೊಳ್ಳಲು ನಮ್ಮ ಜಿಮೈಲ್ ಅಕೌಂಟ್ ಆಯ್ಕೆ ಮಾಡಿಕೊಂಡು save ಮಾಡಬೇಕು, ಆಗ ಮಾತ್ರ ನಮ್ಮ ಮೊಬೈಲ್ ಹಾನಿ ಆದರೂ ಕೂಡ ಬೇರೆ ಮೊಬೈಲ್ ನಲ್ಲಿ ನಮ್ಮ ಜಿಮೈಲ್ ಸೈನ್ ಇನ್ ಮಾಡಿ ನಮ್ಮ ಫೋನ್ ನಂಬರ್ ಗಳನ್ನೂ ಉಳಿಸಿಕೊಳ್ಳಲು ಸಾಧ್ಯ.



_______________________________________________

ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನದ ಮಾಹಿತಿಗಾಗಿ
ಕಾಮೆಂಟ್ ಮಾಡಿ, ಶೇರ್ ಮಾಡಿ, ಲೈಕ್ ಮಾಡಿ.


ಧನ್ಯವಾದಗಳು.
IT Developer,
Santosh Harake.